8 ನೇ ತರಗತಿಬುನಾದಿ ಸಾಮರ್ಥ್ಯಗಳು
1. ಭಾರತೀಯ ರಾಜಮನೆತನಗಳು, ಕೊಡುಗೆಗಳು ಮತ್ತು ಅವುಗಳ ಅವನತಿ,
2. ಯುರೋಪಿಯನ್ನರ ಏಳಿಗೆ
3. ಕರ್ನಾಟಕದ ನಡೆದ ಪ್ರಮುಖ ಚಳುವಳಿಗಳು
4. ಸ್ವಾತಂತ್ರ್ಯ ಹೋರಾಟ
5. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರು
6. ನಮ್ಮ ಸಂವಿಧಾನ ರಚನೆ , ಲಕ್ಷಣಗಳು
7. ನಮ್ಮ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು
8. ಭಾರತದರಕ್ಷಣಾ ವ್ಯವಸ್ಥೆ
9. ಭೂ ಖಂಡಗಳ ಭೌಗೋಳಿಕಲಕ್ಷಣಗಳು
10. ಭೂ ಖಂಡಗಳ ನೈಸರ್ಗಿಕ ಸಂಪನ್ಮೂಲಗಳು
8 ನೇ ತರಗತಿ, ಸಮಾಜವಿಜ್ಞಾನ, ಪೂರ್ವಪರೀಕ್ಷೆ
1. ಎ) ವಿಜಯಪುರದ ಸುಲ್ತಾನನು ಶಿವಾಜಿಯನ್ನ ಏಕೆ ವಿರೋಧಿಸಿದನು?
ಬಿ)ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಿದೆ?
2. ಎ)ಭಾರತದಲ್ಲಿ ಪೋರ್ಚುಗೀಸರ ಅವನತಿಗೆ ಕಾರಣಗಳೇನು?
ಬಿ) ಪ್ಲಾಸಿಕದನ ಯಾರ ಯಾರ ನಡುವೆ ನಡೆಯಿತು?
3. ಎ) ಬೆಂಗಳೂರಿನ ಪ್ರಥಮ ಮಹಿಳಾ ಮೇಯರ್ ಆಗಿದ್ದವರು ಯಾರು ?
ಬಿ) ಕರ್ನಾಟಕದಲ್ಲಿ ದಲಿತ ಚಳುವಳಿಗಳು ಆರಂಭವಾಗಲು ಕಾರಣವೇನು ?
4. ಎ) ಮಂದಗಾಮಿ ನಾಯಕರನ್ನು ಹೆಸರಿಸಿ
ಬಿ)ಅಸಹಕಾರ ಚಳುವಳಿಯನ್ನು ಏಕೆ ಹಿಂತೆಗೆದುಕೊಳ್ಳಲಾಯಿತು ?
5. ಎ) ರಾಜಾ ರಾಮ್ ಮೋಹನರಾಯರನ್ನು ಭಾರತೀಯ ನವೋದಯದ ಪಿತಾಮಹ ಎನ್ನಲು ಕಾರಣವೇನು?
ಬಿ) ಅಲಿಘರ್ ಚಳುವಳಿಯ ನೇತಾರರು ಯಾರಾಗಿದ್ದರು ?
6. ಎ) ಸಂವಿಧಾನ ಎಂದರೇನು ?
ಬಿ) ಸಂವಿಧಾನ ರಚನಾ ಸಭೆಯ ಅದ್ಯಕ್ಷರಾಗಿದ್ದವರು ಯಾರು?
7. ಎ) ಹಕ್ಕು ಎಂದರೇನು?
ಬಿ) ಮೂಲಭೂತ ಕರ್ತವ್ಯಗಳನ್ನು ಸ್ವಯಂ ಸ್ಫೂರ್ತಿಯಿಂದ ನಾವೇಕೆ ಪಾಲಿಸಬೇಕು?
8. ಎ) ಎನ್ ಸಿ ಸಿ ಯ ಧ್ಯೇಯ ವಾಕ್ಯ ಯಾವುದು ?
ಬಿ) ನಮ್ಮ ರಕ್ಷಣಾ ಪಡೆಯ ಜವಾಬ್ದಾರಿಗಳು ಯಾವುವು?
9. ಎ) ಉತ್ತರಅಮೇರಿಕಾ ಖಂಡದ ನಾಲ್ಕುಪ್ರಾಕೃತಿಕ ವಿಭಾಗಗಳು ಯಾವುವು?
ಬಿ)ವಿಶ್ವದಲ್ಲಿ ಅತಿಹೆಚ್ಚು ಕಾಫಿ ಬೆಳೆಯುವ ದೇಶ ಯಾವುದು?
10. ಎ) ಆಸ್ಟ್ರೇಲಿಯಾದಲ್ಲಿ ಕಂಡುಬರುವ ಪ್ರಮುಖ ಕೈಗಾರಿಕೆಗಳನ್ನುತಿಳಿಸಿ.
ಬಿ) ಅಂಟಾರ್ಕಟಿಕ ಖಂಡವನ್ನು ಶ್ವೇತಖಂಡ ಎಂದು ಕರೆಯಲು ಕಾರಣವೇನು?
8 ನೇ ತರಗತಿ ಸಾಫಲ್ಯ ಪರೀಕ್ಷೆ
1) ಎ) ಸಂಗಮ ವಂಶದ ಪ್ರಸಿದ್ಧ ದೊರೆ ಯಾರು?
ಬಿ) ಮಹಮದ್ ಬಿನ್ ತೊಘಲಕ್ ನು ರಾಜಧಾನಿಯನ್ನು ಎಲ್ಲಿಂದ ಎಲ್ಲಿಗೆ ವರ್ಗಾಯಿಸಿದನು ?
2) ಎ) ದಸ್ತಕ್ ಗಳೆಂದರೇನು?
ಬಿ) ಸಹಾಯಕ ಸೈನ್ಯಪದ್ದತಿ ಜಾರಿಗೆ ತಂದವರು ಯಾರು?
3) ಎ) ‘ತುಂಗಾಮೂಲವನ್ನು ಉಳಿಸಿ’ ಚಳುವಳಿ ಏಕೆ ಆರಂಭವಾಯಿತು
ಬಿ) ಕರ್ನಾಟಕದಲ್ಲಿ ಪರಿಸರ ಸಂರಕ್ಷಣೆಗಾಗಿ ನಡೆದ ಚಳುವಳಿಗಳನ್ನು ಹೆಸರಿಸಿ ?
4) ಎ) ನೇತಾಜಿ ಎಂದು ಪ್ರಸಿದ್ದರಾಗಿದ್ದ ಸ್ವಾತಂತ್ರ್ಯಹೋರಾಟಗಾರ ಯಾರು?
ಬಿ)ಬ್ರಿಟೀಷರ ವಿರುದ್ಧ ಉಪ್ಪಿನ ಸತ್ಯಾಗ್ರಹ ಆರಂಭಿಸಿದವರು ಯಾರು ?
5) ಎ) “ಏಳಿ ! ಎದ್ದೇಳಿ ! ಗುರಿಮುಟ್ಟುವ ತನಕ ನಿಲ್ಲದಿರಿ “ ಇದು ಯಾರ ಕರೆಯಾಗಿತ್ತು ?
ಬಿ) ಸತ್ಯ ಶೋಧಕ ಸಮಾಜದ ಸ್ಥಾಪಕರು ಯಾರು ?
6) ಎ) ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದವರು ಯಾರು ?
ಬಿ) ವಯಸ್ಕ ಮತದಾನ ಪದ್ಧತಿ ಎಂದರೇನು ?
7) ಎ) ಯಾವುದಾದರು ಎರಡು ಮೂಲಭೂತ ಹಕ್ಕಗಳನ್ನು ತಿಳಿಸಿ?
ಬಿ) ಯಾವುದಾದರು ಎರಡು ಕರ್ತವ್ಯಗಳನ್ನು ತಿಳಿಸಿ
8) ಎ) ಭಾರತದ ಭೂಸೇನೆಯ ಮುಖ್ಯಸ್ಥರನ್ನು ಯಾವ ಹೆಸರಿನಿಂದ ಕರೆಯುವರು ?
ಬಿ) ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸಲು ನಿಮಗೆ ಇಚ್ಚೆಯಿದೆಯೇ ? ಕಾರಣ ಕೊಡಿ.
9) ಎ) ಅಮೇರಿಕಾದಲ್ಲಿರುವ ವಿಶ್ವದ ಅತಿದೊಡ್ಡ ಸಿಹಿನೀರಿನ ಸರೋವರ ಯಾವುದು?
ಬಿ) ದಕ್ಷಿಣ ಅಮೇರಿಕಾ ಖಂಡವನ್ನು ಹುಲ್ಲುಗಾವಲುಗಳ ನಾಡು ಎನ್ನಲು ಕಾರಣವೇನು?
10) ಎ) ಅಂಟಾರ್ಕಟಿಕ ಖಂಡದಲ್ಲಿ ಕಂಡುಬರುವ ಪ್ರಾಣಿಗಳನ್ನು ಹೆಸರಿಸಿ.
ಬಿ) ಆಸ್ಟ್ರೇಲಿಯಾದ ಪ್ರಮುಖ ನದಿಗಳನ್ನು ಹೆಸರಿಸಿ
9 ನೇ ತರಗತಿ ಬುನಾದಿ ಸಾಮರ್ಥ್ಯಗಳು
1. ಆಧಾರಗಳು,ಪ್ರಾಮುಖ್ಯತೆ ಮತ್ತು ಭೌಗೋಳಿಕ ಲಕ್ಷಣಗಳು
2. ಪ್ರಪಂಚದ ನಾಗರೀಕತೆಗಳು ಮತ್ತು ಅವುಗಳ ಕೊಡುಗೆಗಳು.
3. ಭಾರತವನ್ನಾಳಿದ ಪ್ರಮುಖ ರಾಜಮನೆತನಗಳು ಮತ್ತು ಅವರ ಕೊಡುಗೆ.
4. ರಾಜ್ಯಶಾಸ್ತ್ರದ ಅರ್ಥ ಮತ್ತು ಮಹತ್ವ
5. ಮಾನವ ಮತ್ತು ಸಮಾಜ, ಸಂಸ್ಕೃತಿಯ ಪ್ರಾಮುಖ್ಯತೆ
6. ಭೂಮಿ ಮತ್ತು ಭೂಮಿಯ ಗಾತ್ರ, ಆಕಾರ, ಚಲನೆಗಳು
7. ಭೂಮಿಯ ವಲಯಗಳು.ಶಿಲಾಗೋಳ, ವಾಯುಗೋಳ,ಜಲಗೋಳ
8. ಅರ್ಥಶಾಸ್ತ್ರದ ಅರ್ಥ ಮತ್ತು ಮಹತ್ವ.
9. ರಾಷ್ಟ್ರೀಯ ಆದಾಯದ ಅರ್ಥ ಮತ್ತು ಮಹತ್ವ.
10. ವಾಣಿಜ್ಯ ವ್ಯವಹಾರದ ಅರ್ಥ ಮತ್ತು ಬೆಳವಣಿಗೆ.
9 ನೇ ತರಗತಿ, ಸಮಾಜವಿಜ್ಞಾನ ಪೂರ್ವಪರೀಕ್ಷೆ
1. ಎ) ಆಧಾರಗಳ ವಿಧಗಳನ್ನುತಿಳಿಸಿ.
ಬಿ) ದಕ್ಷಿಣ ಭಾರತದಲ್ಲಿ ಹರಿಯುವ ಪ್ರಮುಖ ನದಿಗಳನ್ನು ಹೆಸರಿಸಿ?
2. ಎ) ಹರಪ್ಪ ನಾಗರೀಕತೆಯ ಈಜುಕೊಳ ಯಾವ ನಗರದಲ್ಲಿ ಕಂಡುಬಂದಿದೆ?
ಬಿ) ಚೀನಾ ನಾಗರೀಕತೆಯ ಪ್ರಮುಖ ಕೊಡುಗೆಗಳಾವುವು?
3. ಎ) ಚಾಲುಕ್ಯರ ಆಸ್ಥಾನಕ್ಕೆ ಭೇಟಿ ನೀಡಿದ ಚೀನಿ ಯಾತ್ರಿಕ ಯಾರು?
ಬಿ) ಕರ್ನಾಟಕದಲ್ಲಿ ಹೊಯ್ಸಳರ ಕಾಲದ ದೇವಾಲಯಗಳು ಯಾವ ಊರಿನಲ್ಲಿವೆ ಹೆಸರಿಸಿ .
4. ಎ) ರಾಜ್ಯ ಶಾಸ್ತ್ರ ಎಂದರೇನು ?
ಬಿ) ತರಬೇತಿಯ ವಿಧಗಳನ್ನು ತಿಳಿಸಿ ?
5. ಎ) ಸಾಮಾಜೀಕರಣ ಎಂದರೇನು?
ಬಿ) ಸಂಸ್ಕೃತಿ ಎಂದರೇನು?
6. ಎ) ಭೂಮಿಗೆ ಜೀವಂತಗ್ರಹ ಎನ್ನಲು ಕಾರಣವೇನು?
ಬಿ) ಭಾರತದಪ್ರಮಾಣವೇಳೆ-------- ರೇಖಾಂಶಅವಲಂಬಿಸಿದೆ
7. ಎ)ನಗ್ನೀಕರಣದ ಕತೃಗಳು ಯಾವುವು
ಬಿ)ಮಾರುತಗಳು ಎಂದರೇನು ?
8. ಎ) ಅರ್ಥಶಾಸ್ತ್ರ ಎಂದರೇನು?
ಬಿ)ಉತ್ಪಾದನೆಯ ಮೂಲಾಂಶಗಳು ಯಾವುವು ?
9. ಎ) ರಾಷ್ಟ್ರೀಯ ಆದಾಯ ಎಂದರೇನು ?
ಬಿ) ಭಾರತದಲ್ಲಿ ಕೃಷಿ ಬಿಕ್ಕಟ್ಟಿಗೆ ಕಾರಣಗಳೇನು ?
10. ಎ) ಉದ್ಯೋಗ ಎಂದರೇನು?
ಬಿ) ನೀವು ಗಮನಿಸಿರುವ ಚಿಲ್ಲರೆವ್ಯಾಪಾರಿಗಳ ವಿಧಗಳನ್ನು ತಿಳಿಸಿ.
9ನೇ ತರಗತಿ ಕ್ರಿಯಾ ಯೋಜನೆ
.
9 ನೇ ತರಗತಿ ಸಾಫಲ್ಯ ಪರೀಕ್ಷೆ
1) ಎ) ಕನ್ನಡದಲ್ಲಿ ದೊರೆತಿರುವ ಅತ್ಯಂತ ಪ್ರಾಚೀನ ಶಾಸನ ಯಾವುದು?
ಬಿ) ಭಾರತದ ಉತ್ತರ ಭಾಗದಲ್ಲಿ ಯಾವ ಪರ್ವತ ಶ್ರೇಣಿಯಿದೆ?
2) ಎ) ವೇದಗಳ ನಾಲ್ಕು ವಿಧಗಳನ್ನು ತಿಳಿಸಿ.
ಬಿ) ಪ್ರಾಚೀನ ಈಜಿಪ್ಟಿನಲ್ಲಿ ಕಂಡುಬರುತ್ತಿದ್ದ ‘ಮಮ್ಮಿ‘ ಎಂದರೇನು?
3) ಎ) ಅಶೋಕ ಯಾವ ವಂಶಕ್ಕೆಸೇರಿದ ಅರಸ?
ಬಿ) ಕಾಳಿದಾಸನು ರಚಿಸಿದ ಎರಡು ಕೃತಿಗಳನ್ನು ತಿಳಿಸಿ.
4) ಎ) ಸಾರ್ವಜನಿಕ ಆಡಳಿತದ ಪಿತಾಮಹ ಯಾರು ?
ಬಿ).ರಾಜ್ಯಶಾಸ್ತ್ರ ಅಧ್ಯಯನದ ಒಂದು ಪ್ರಾಮುಖ್ಯತೆ ತಿಳಿಸಿ?
5) ಎ) ಸಮಾಜಶಾಸ್ತ್ರದ ಪಿತಾಮಹ ಯಾರು?
ಬಿ). ನಮ್ಮಭಾನೆಗಳನ್ನು------ ಮೂಲಕವ್ಯಕ್ತಪಡಿಸುತ್ತೇವೆ
6) ಎ) ಭೂಮಿಯು ಯಾವ ಆಕಾರದಲ್ಲಿದೆ ?
ಬಿ).ಅಕ್ಷಾಂಶ ಎಂದರೇನು ?
7) ಎ) ಸಮುದ್ರ ಮತ್ತು ಸಾಗರಗಳ ನಡುವಿನ ವ್ಯತ್ಯಾಸವೇನು?
ಬಿ)ಭೂಕಂಪನದ ತೀವ್ರತೆ ಅಳೆಯುವ ಮಾಪನ ಯಾವುದು?
8) ಎ) ಉತ್ಪಾದನೆ ಎಂದರೇನು?
ಬಿ) ಹಣದ ಪ್ರತಿಫಲಕ್ಕಾಗಿ ಮಾಡುವ ದೈಹಿಕ ಮತ್ತು ಮಾನಸಿಕ ಕೆಲಸಕ್ಕೆ ____ಎನ್ನವರು
9) ಎ) ಭಾರತದ ಕೃಷಿಯನ್ನು --------- ಜೊತೆಗೆ ಆಡುವ ಜೂಜಾಟ ಎನ್ನುವರು ?
ಬಿ) ಕೈಗಾರಿಕೆಗಳಿಂದಾಗುವ ಉಪಯೋಗಗಳು ಯಾವುವು ?
10) ಬಿ) ಏಕವ್ಯಕ್ತಿ ಮಾಲಿಕತ್ವ ಸಂಸ್ಥೆಯ ಎರಡು ಉಪಯೋಗಗಳನ್ನು ತಿಳಿಸಿ?
ಎ) ವಸ್ತುವಿನಿಮಯ ಪದ್ದತಿ ಎಂದರೇನು ?
ಚಟುವಟಿಕೆಗಳ ಪಟ್ಟಿ
1. ಪಟ್ಟಿ ಮಾಡುವುದು
2. ಚಾರ್ಟ್ ತಯಾರಿಕೆ
3. ಕೋಷ್ಠಕ ರಚನೆ
4. ಗುಂಪು ಚರ್ಚೆ
5. ಚರ್ಚಾ ಸ್ಪರ್ಧೆ
6. ಭಾಷಣ
7. ಆಶುಭಾಷಣ
8. ಸೆಮಿನಾರ್/ಮಂಡನೆ
9. ಮಾಹಿತಿ ಸಂಗ್ರಹಣೆ
10. ವರದಿ ತಯಾರಿಕೆ
11. ಮಾದರಿ ತಯಾರಿಕೆ
12. ಪ್ರಬಂಧ ರಚನೆ
13. ಸಂದರ್ಶನ
14. ಕ್ಷೇತ್ರ ದರ್ಶನ/ಪ್ರವಾಸ
15. ನಾಟಕ
16. ನಕ್ಷಾ ರಚನೆ
17. ಪ್ರಶ್ನಾಕೋಠಿ ತಯಾರಿಕೆ
18. ರಸಪ್ರಶ್ನೆ ಕಾರ್ಯಕ್ರಮ
19. ಆಲ್ಬಂ ತಯಾರಿಕೆ
20. ಪಿಪಿಟಿ ಪ್ರದರ್ಶನ
10 ನೇ ತರಗತಿ ಬುನಾದಿ ಸಾಮರ್ಥ್ಯಗಳು
1. ಹೊಸ ಭೂ ಪ್ರದೇಶಗಳ ಅನ್ವೇಷಣೆ, ಭಾರತಕ್ಕೆ ಜಲಮಾರ್ಗ ಸಂಶೋಧನೆಗೆ ಕಾರಣವಾದ ಅಂಶಗಳು,
2. ಮೊಘಲರ, ಮರಾಠರ ಅವನತಿ,ಬ್ರಿಟೀಷರ ಏಳಿಗೆ
3. ಭಾರತ ಎದುರಿಸುತ್ತಿರುವ ಸಾಮಾಜಿಕ ಆರ್ಥಿಕ ಸಮಸ್ಯೆಗಳು
4. ಭಾರತದ ನಕ್ಷೆ ರಚನೆ,ರಾಜ್ಯಗಳನ್ನು, ರಾಜಧಾನಿಗಳನ್ನು ಗುರುತಿಸುವುದು
5. ಭಾರತದ ಭೌಗೋಳಿಕ ಲಕ್ಷಣಗಳು
10 ನೇ ತರಗತಿ, ಸಮಾಜವಿಜ್ಞಾನ ಪೂರ್ವಪರೀಕ್ಷೆ
1. ಎ) ಯೂರೋಪಿನಲ್ಲಿ ಹೊಸ ಭೂ ಪ್ರದೇಶಗಳ ಅನ್ವೇಷಣೆಗೆ ಕಾರಣವಾದ ಅಂಶಗಳಾವುವು ?
ಬಿ) ಭಾರತಕ್ಕೆ ಯೂರೋಪಿನಿಂದ ಹೊಸ ಜಲಮಾರ್ಗ ಕಂಡುಹಿಡಿದವರು ಯಾರು ?
2. ಎ) ಬ್ರಿಟೀಷರಿಗೆ ಭಾರತದಲ್ಲಿ ವ್ಯಾಪಾರ ಮಾಡಲು ಅನುಮತಿ ನೀಡಿದ ಮೊಘಲ್ ಅರಸ ಯಾರು ?
ಬಿ)ಮರಾಠರ ಅವನತಿಗೆ ಕಾರಣಗಳೇನು ?
3. ಎ) 2011 ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ ಎಷ್ಟು
ಬಿ) ನಿರುದ್ಯೋಗದ ವಿಧಗಳನ್ನು ತಿಳಿಸಿ
4. ಭಾರತ ನಕ್ಷೆಯನ್ನು ಬರೆದು ಪೂರ್ವ ಕರಾವಳಿ ಮತ್ತು ಪಶ್ಚಿಮ ಕರಾವಳಿ ಗುರುತಿಸಿ
5. ಭಾರತ ನಕ್ಷೆಯಲ್ಲಿ ಕರ್ನಾಟಕ ರಾಜ್ಯ , ಮತ್ತು ಅದರ ರಾಜಧಾನಿಯನ್ನು ಗುರುತಿಸಿ.
10 ನೇ ತರಗತಿ ಸಾಫಲ್ಯ ಪರೀಕ್ಷೆ
1. ಎ)ಹೊಸ ಭೂ ಅನ್ವೇಷಣೆಗೆ ಪ್ರೇರಣೆಯಾದ ಅಂಶಗಳು ಯಾವುವು ?
ಬಿ)ವಾಸ್ಕೋಡಗಾಮ ಯಾವ ದೇಶಕ್ಕೆ ಸೇರಿದವನು?
2. ಎ)ಮೊಘಲರ ಅವನತಿಗೆ ಕಾರಣಗಳೇನು ?
ಬಿ) ಮೂರನೇ ಪಾಣಿಪತ್ ಕದನ ಯಾರ ಯಾರ ನಡುವೆ ನಡೆಯಿತು ?
3. ಎ)ಮರೆಮಾಚಿದ ನಿರುದ್ಯೋಗ ಎಂದರೇನು
ಬಿ)2001 ರ ಜನಗಣತಿ ಪ್ರಕಾರ ಬಾರತದ ಸಾಕ್ಷರತೆ ಎಷ್ಟು ?
4. ಭಾರತದ ನಕ್ಷೆ ಬರೆದು. ಕಾವೇರಿ ನದಿಯನ್ನು ಗುರುತಿಸಿ
5. ಭಾರತದ ನಕ್ಷೆಯಲ್ಲಿ ಗುಜರಾತ್ ರಾಜ್ಯ, ರಾಷ್ತ್ರ ರಾಜಧಾನಿ ದೆಹಲಿಯನ್ನು ಗುರುತಿಸಿ.
10ನೇ ತರಗತಿ ಕ್ರಿಯಾ ಯೋಜನೆ
No comments:
Post a Comment